ಲೇಖನ ಹುಡುಕಿ

Friday, September 13, 2024

ದರ್ಶನ್ ಮತ್ತು ಪವಿತ್ರಾ ಸಂಬಂಧ ಎಷ್ಟು ದಿನ ಬಾಳುತ್ತದೆ?


  
ದರ್ಶನ್ ಮತ್ತು ಪವಿತ್ರಾ ಸಂಬಂಧ ಎಷ್ಟು ದಿನ ಬಾಳುತ್ತದೆ?

            ಇಂತಹದ್ದೊಂದು ಪ್ರಶ್ನೆ ಈಗ ದರ್ಶನ್ ಮತ್ತು ಪವಿತ್ರಾ ಅಭಿಮಾನಿಗಳಲ್ಲಿ ಮೂಡತೊಡಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅದಾಗಲೇ ಜೈಲು ಸೇರಿರುವ ಇಬ್ಬರ ಮಧ್ಯೆ ದೂರ ಬಂದಾಗಿದೆ. ಪರಪ್ಪನ ಅಗ್ರಹಾರದಲ್ಲಿ ಒಂದೇ ಜೈಲಿನಲ್ಲಿ ಇದ್ದೀವೆಂಬ ಭಾವನೆಯಾದರೂ ಇತ್ತು. ಆದರೀಗ ದೂರದ ಬಳ್ಳಾರಿ ಜೈಲಿಗೆ ದರ್ಶನ್ ವರ್ಗಾವಣೆಯಾದ ನಂತರ ಪವಿತ್ರಾ ಈಗ ಒಬ್ಬಂಟಿಯಾಗಿದ್ದಾರೆ. ಅತ್ತ ಜೈಲಿಗೆ ಪತ್ನಿಯನ್ನು ಕರೆಸಿಕೊಳ್ಳುತ್ತಿರುವ ದರ್ಶನ್ ಇತ್ತ ಪ್ರೇಯಸಿಯ ದುಃಖವನ್ನು ಹೆಚ್ಚು ಮಾಡುತ್ತಿರುವುದಂತೂ ಸತ್ಯವಾಗಿದೆ.

              ಪವಿತ್ರಾ ಹೇಳಿಕೆಯ ಪ್ರಕಾರ ದರ್ಶನ್ ಮತ್ತು ಪವಿತ್ರಾ ಫೆಬ್ರವರಿಯಲ್ಲಿ ಜಗಳವಾಡಿ ದೂರವೇ ಇದ್ದಾರೆ. ದರ್ಶನ್ ವಿವಾಹ ವಾರ್ಷಿಕೋತ್ಸವವನ್ನು ಪತ್ನಿಯೊಂದಿಗೆ ಆಚರಿಸಿಕೊಂಡಿದ್ದು ಪವಿತ್ರಾರನ್ನು ಕೆರಳಿಸಿತ್ತು. ಆ ನಂತರ ತಮ್ಮ ಮತ್ತು ದರ್ಶನ್ ಸಂಬಂಧವನ್ನು ಹೊರಹಾಕಲು ಇನ್ಸ್ಟಾ ಖಾತೆಯನ್ನು ಪವಿತ್ರಾ ಬಳಸಿಕೊಂಡಿದ್ದರು. ಇದಕ್ಕೆ ವಿಜಯಲಕ್ಷ್ಮಿ ಸರಿಯಾಗಿಯೇ ಉತ್ತರ ಕೊಟ್ಟಿದ್ದರು. ಇವರಿಬ್ಬರ ಜಗಳವನ್ನು ನೋಡಿ ವಿಜಯಲಕ್ಷ್ಮಿ ಪರ ನಿಂತಿದ್ದ ರೇಣುಕಾಸ್ವಾಮಿ. ದರ್ಶನ್ ರಿಂದ ಪವಿತ್ರಾರನ್ನು ದೂರ ಮಾಡಲು ತನ್ನದೇ ಆಟವಾಡಿದ್ದ ರೇಣುಕಾಸ್ವಾಮಿ ಕೊನೆಗೆ ಮಸಣ ಸೇರಿದ್ದ. 

            ಪತ್ನಿ ಮತ್ತು ಪ್ರೇಯಸಿಯ ನಡುವೆ ಹೈರಾಣಾಗಿದ್ದ ದರ್ಶನ್ ಪ್ರೇಯಸಿಯ ಮೇಲಿನ ಪ್ರೀತಿಯನ್ನು ಸಾಬೀತು ಮಾಡಲು ಕೊಲೆ ಮಾಡಿದರಾ? / ಮಾಡಿಸಿದರಾ?ಎನ್ನುವ ಪ್ರಶ್ನೆಯೂ ಇದೆ.  ಜೊತೆಗೆ ಅದಾಗಲೇ ಬಿಪಿ, ಸಕ್ಕರೆ ಕಾಯಿಲೆಗಳಿಂದ ಬಳಲುತ್ತಿದ್ದ ದರ್ಶನ್ ಪ್ರೇಯಸಿಯನ್ನು ತೃಪ್ತಿಪಡಿಸಲಾಗದ ತಲ್ಲಣದಲ್ಲಿದ್ದರಾ? ಆ ತಲ್ಲಣವೇ ರೇಣುಕಾಸ್ವಾಮಿಯ ಗುಪ್ತಾಂಗದ ಫೋಟೊ/ವಿಡಿಯೊ ನೋಡಿದ ಕೂಡಲೇ ಕೊಲೆ ಮಾಡುವಷ್ಟು ಕೆರಳಲು ಕಾರಣವಾಯಿತಾ? ಎಲ್ಲದಕ್ಕೂ ಖುದ್ದು ದರ್ಶನ್ ಉತ್ತರ ಹೇಳಬೇಕಷ್ಟೆ.

            ಕಾನೂನಾತ್ಮಕವಾಗಿ ಇನ್ನೂ ಪತ್ನಿಯಾಗಿರುವ ವಿಜಯಲಕ್ಷ್ಮಿ ದರ್ಶನ್ ಜೊತೆಗೆ ನಿಲ್ಲಬೇಕಾಗಿರುವುದು ಅನಿವಾರ್ಯವಾಗಿದೆ. ಗಂಡ ಜೈಲಿನಲ್ಲಿರುವಾಗ ಖಾಸಗಿ ಔತಣಕೂಟಕ್ಕೆ ಹೋಗಿರುವ ವಿಜಯಲಕ್ಷ್ಮಿ ಬಗ್ಗೆ ಅಭಿಮಾನಿಗಳಲ್ಲಿ ಅನುಮಾನ ಮೂಡಿಸತೊಡಗಿದೆ. ಆದಾಗ್ಯೂ ಗಂಡ ಜೈಲಿಗೆ ಹೋದಾಗ ಹೆಂಡತಿ ತನ್ನ ಬದುಕನ್ನು ಬದುಕಲು ಹಕ್ಕಿಲ್ಲವೆ? ಎಂಬ ಪ್ರಶ್ನೆಯೂ ಇದೆ. ೨೦೧೩ರ ದಾಂಪತ್ಯ ಕಲಹ ಮತ್ತು ಜೈಲುವಾಸದ ನಂತರ ದರ್ಶನ್ ಪತ್ನಿಯಿಂದ ವಿಮುಖರಾಗಿ ಪವಿತ್ರಾ ಸೆರಗು ಸೇರಿದ್ದರು. ೧೧ ವರ್ಷಗಳಾದರೂ ವಿಜಯಲಕ್ಷ್ಮಿ ಮಗನಿಗಾಗಿ, ಸ್ಥಾನ ಮಾನಕ್ಕಾಗಿ ಪತ್ನಿ ಸ್ಥಾನ ಬಿಟ್ಟುಕೊಟ್ಟಿರಲಿಲ್ಲ. ದರ್ಶನ್ ಜೈಲುಪಾಲಾಗಿರುವ ಈ ಸಂದರ್ಭದಲ್ಲಿ ಮನೆ, ಕಾನೂನು ಎಲ್ಲಾ ನಿಭಾಯಿಸುವ ಜೊತೆಗೆ ಗಂಡನ ಭಾವನಾತ್ಮಕ ಬೆಂಬಲಕ್ಕೂ ನಿಲ್ಲಬೇಕಿದೆ. ಈ ಅಗ್ನಿಪರೀಕ್ಷೆಯ ಸನ್ನಿವೇಶ ಮಾಜಿ ಪತಿ-ಪತ್ನಿಯನ್ನು ಮತ್ತೆ ಒಂದು ಮಾಡಿದರೂ ಆಶ್ಚರ್ಯವಿಲ್ಲ.  



            ಇವೆಲ್ಲದರ ನಡುವೆ ಸಾಮಾಜಿಕ ಬೆಂಬಲವಿಲ್ಲದ, ಕಾನೂನು ಹೋರಾಟದಲ್ಲೂ ಒಂಟಿಯಾಗಿರುವ ಪವಿತ್ರಾ ದರ್ಶನ್ ಸಾಂಗತ್ಯವನ್ನು ಮುಂದುವರೆಸುತ್ತಾರಾ? ಪತ್ನಿ ಪ್ರೇಮ, ಕುಟುಂಬ, ಇಂಡಸ್ಟ್ರಿ, ಸಮಾಜ, ಕಾನೂನು, ಅಭಿಮಾನಿಗಳು ಇವುಗಳ ನಡುವೆ ದರ್ಶನ್ ನಿಜವಾಗಿಯೂ ಪವಿತ್ರಾ ಜೊತೆಗೆ ನಿಲ್ಲುತ್ತಾರಾ?ಸಮಯವೇ ಉತ್ತರ ಹೇಳಬೇಕು.

            ನ್ಯಾಯಾಲಯದಲ್ಲಿ ಇನ್ನೂ ವಿಚಾರಣೆ ಆರಂಭವಾಗುವ ಹಂತದಲ್ಲಿದೆ. ವಿಚಾರಣೆ ಮುಗಿದು ಶಿಕ್ಷೆ ಪ್ರಕಟವಾಗುವ ಹೊತ್ತಿಗೆ ದರ್ಶನ್ - ಪವಿತ್ರಾ ಯುಗಳಗೀತೆಗೂ ಒಂದು ಕ್ಲೈಮ್ಯಾಕ್ಸ್ ದೊರೆಯಲಿದೆ. 


No comments:

Post a Comment

ಉಣಲಿರದಿರುವವರ ನಡುವೆ ಉಣಲಿರುವವರ ಒಣ ರಾಜಕೀಯ

 ಇತ್ತೀಚೆಗೆ ನಟಿ ಲಕ್ಷ್ಮಿ ಅವರ ಮಾತು ಬಹಳ ಚರ್ಚೆಗೆ ಕಾರಣವಾಗಿದೆ. ಸ್ನೇಹಿತೆಯೊಬ್ಬಳು ತಲೆಗೆ ಬಣ್ಣವನ್ನೂ ಹಾಕದೆ ಬಹಳ ಹೀನಾಯ ಸ್ಥಿತಿಯಲ್ಲಿ ತನ್ನನ್ನು ನೋಡಲು ಬಂದಿದ್ದರು...